Tuesday, April 13, 2010

ಪ್ರೀತಿಯ ತಳಹದಿ
ಗುಣವೋ ಆಕರ್ಷಣೆಯೋ?

ಗೆಳೆಯರೇ,

ಇಂದಿನ ಯುವ ಜನತೆಯಲ್ಲಿ ಪ್ರೀತಿಸುವವರ ಸಂಖ್ಯೆ ಹೆಚ್ಚು, ದಿನನಿತ್ಯ ನಮ್ಮ ಕಿವಿಗಳಿಗೆ ಒಂದಿಲ್ಲೊಂದು ಕಥೆಯು ಕೇಳಬರುತ್ತಲೇ ಇರುತ್ತೆ. ಮನದಲ್ಲಿ ಆಶ್ಚರ್ಯದ ಚಿನ್ಹೆ ಮೂಡುತ್ತಲೇ ಇರುತ್ತದೆ, ಇವನು ಪ್ರೀತಿಸುತ್ತಿದ್ದಾನಾ?, ಅವಳಾ!! ನಂಬಲಿಕ್ಕೆ ಆಗುವುದಿಲ್ಲ, ಎಷ್ಟು ಮೆತ್ತಗಿದ್ದ, ಮಾತನಾಡುತ್ತಿರಲೇ ಇಲ್ಲವಲ್ಲೋ ಎಂದೆಲ್ಲ ಅಂದುಕೊಳ್ಳುತ್ತಾ ಇರುತ್ತೇವೆ.

ಆದ್ದರಿಂದ ಮನದಲ್ಲಿ ಒಂದು ಪ್ರಶ್ನೆ ಮೂಡುವುದು ಸಹಜ, ಎಂಥವರನ್ನೂ ಬದಲಿಸುವ ಈ ಪ್ರೀತಿಯ ಕಾರಣ ಏನು? ಈ ಪ್ರೀತಿಯ ತಳಹದಿ ಏನು ಎಂದು ಅಥವಾ ಈ ಪ್ರೀತಿಯು ಹುಟ್ಟುವುದಕ್ಕೆ ಕಾರಣವಾದರೂ ಏನು? ಮನಸ್ಸಿಗೆ ಥಟ್ಟನೆ ಹೊಳೆಯುವ ಮೊಟ್ಟ ಮೊದಲ ಉತ್ತರ "ಆಕರ್ಷಣೆ", ಆಕರ್ಷಣೆಗೆ ಹಲವಾರು ಕಾರಣಗಳೂ ಇರಬಹುದು, ಮೊದಲನೆಯದಾಗಿ ಚೆಲುವು ತುಂಬಾ ಗಮನಾರ್ಹ ಪಾತ್ರ ವಹಿಸುವುದು. ಇನ್ನೊಬ್ಬರೆಡೆಗೆ ನೋಡುವುದಕ್ಕೂ
ಒಂದು ಸೆಳೆತವಿರಬೇಕು , ಏನೂ ತಿಳಿಯದ ಒಬ್ಬ ವ್ಯಕ್ತಿಯ ನೋಡಿ ಅವನೇ ಅಥವಾ ಅವಳೇ ನನ್ನ ಬಾಳ ಸಂಗಾತಿ ಅಂತ ನಿರ್ಧರಿಸುವುದೆಂದರೆ ಸಾಮಾನ್ಯದ ಮಾತಲ್ಲ, ಅಷ್ಟು ಶಕ್ತಿ ಆಕರ್ಷಣೆಯಲ್ಲಿದೆಯೇ? ಗೊತ್ತಿಲ್ಲ ನಿರ್ಧಾರವಂತೂ ಮನಸಿನಲ್ಲಿಯೇ ಆಗಿ ಹೋಗಿರುತ್ತದೆ. ಇದು ಸರಿಯೋ ತಪ್ಪೋ ಆಕರ್ಷಣೆಗೆ ಆ ಚೌಕ್ಕಟುಗಳು ಇರುವುದಿಲ್ಲ.

ಎರಡನೇ ಉತ್ತರ ಗುಣ, ಪ್ರೀತಿಯು ಮೂಡುವುದಕ್ಕೆ ಮತ್ತೊಬ್ಬರ ಗುಣವೂ ಕಾರಣವಾಗಿರಬಹುದು, ಮತ್ತೊಬ್ಬರ ನಡುವಳಿಕೆ ಹಿಡಿಸಿ ಪ್ರೀತಿಸಿದವರೂ ಇದ್ದಾರೆ. ಆದರೆ ಇಲ್ಲಿ ಪ್ರೀತಿ ಶುರುವಾಗುವುದಕ್ಕೆ ಬೇಕಾಗುವ ಸಮಯ ಹೆಚ್ಚು, ಮತ್ತೊಬ್ಬರನ್ನು ಅರ್ಥ ಮಾಡಿಕೊಂಡ ಮೇಲೆ ಪ್ರೀತಿ ಹುಟ್ಟಿರಬಹುದು.

ಇವೆರಡರಲ್ಲಿ ಯಾವುದು ಉತ್ತಮ? ಪ್ರೀತಿ ಮಾಡಿದ ಮೇಲೆ ಅರ್ಥ ಮಾಡಿಕೊಳ್ಳುವುದೋ ಅಥವಾ ಅರ್ಥ ಮಾಡಿಕೊಂಡ ಮೇಲೆ ಪ್ರೀತಿ ಮಾಡುವುದೋ?
ಯಾವುದು ಒಳ್ಳೆಯದು ಅಥವಾ ಯಾವುದರಲ್ಲಿ ಗೆಲುವಿದೆ ಯಾರಿಗೂ ತಿಳಿಯದು , ಹಾಗಾದರೆ ಪ್ರೀತಿ ಜೂಜಾ? ಗುಣವು ತಿಳಿದ ನಂತರ ಪ್ರೀತಿಸುವುದರಿಂದ ಆ ಜೂಜು ಕಡಿಮೆಯೇ?

ಗುಣ ಹಾಗೂ ಚೆಲುವು ಎರಡನ್ನೂ ಗಮನಿಸಿ ಪ್ರೀತಿಸುವವರು ಇದ್ದಾರೆ. ಇಲ್ಲಿ ಏನು ನಿರ್ಧರಿಸುವುದೋ ಗೊತ್ತಾಗುತ್ತಿಲ್ಲ,
ತುಂಬಾ ಪ್ರೆಶ್ನೆಗಳು ಮನದಲ್ಲಿ ಮೂಡುತ್ತವೆ. ಆಕರ್ಷಣೆ ಮೌಡ್ಯವೇ? ಗುಣ ತಿಳಿದರೂ ಅದೇ ಗುಣವನ್ನು ಅಳೆಯಲು ಬೇಕಾದ ಸಮಯ ಎಷ್ಟು? ಗುಣವೂ ಬದಲಾಗುವುದಲ್ಲವೇ? ಅಥವಾ ಎಲ್ಲಾ ಅವರವರ ಅನುಭವದ ಮೆಲಿದೆಯೇ?

ಗೆಳೆಯರೇ ನಿಮ್ಮ ಅನಿಸಿಕೆ ಏನು?
--
ಮಜಾ ಮಾಡಿ ,
ಅಮಿತ್ ಎ